ಸಾಹಿತ್ಯ: ಶ್ರೀ ವ್ಯಾಸರಾಯರು 
ರಾಗ : ಯಮುನ ಕಳ್ಯಾಣಿ 
ತಾಳ : ಛಾಪು 
ಗಾಯನ: ಡಾ|ಕೆ.ಜೆ. ಜೇಸುದಾಸ್ 

ಕೃಷ್ಣ ನೀ ಬೇಗನೆ ಬಾರೊ |೫| 
ಮುಖವನ್ನು ತೋರೊ
ಕೃಷ್ಣ ನೀ ಬೇಗನೆ ಬಾರೊ..

ಕಾಲಲಂದಿಗಿ ಗೆಜ್ಜೆ ... ನೀಲದ ಬಾವುಲಿ
ನೀಲ ವರ್ಣನೆ ನಾಟ್ಯವ ಆಡುತ ಬಾರೊ |೨|
ಕೃಷ್ಣ ನೀ ಬೇಗನೆ ಬಾರೊ..

ಉಡಿಯಲ್ಲಿ ಉಡುಗೆಜ್ಜೆ.. ಬೆರಳಲ್ಲಿ ಉಂಗುರ |೨| 
ಕೊರಳೊಳು ಹಾಕಿದ್ದ ವೈಜಯಂತಿ ಮಾಲೆ |೨| 
ಕೃಷ್ಣ ನೀ ಬೇಗನೆ ಬಾರೊ.. 

ಕಾಶಿ ಪಿತಾಂಬರ.. ಕೈಯಲ್ಲಿ ಕೊಳಲು |೨| 
ಪೂಸಿದ ಶ್ರೀಗಂಧ ಮೈಯೋಳು ಘಮ ಘಮ |೨| 
ಕೃಷ್ಣ ನೀ ಬೇಗನೆ ಬಾರೊ.. 

ತಾಯಿಗೆ ಬಾಯಲ್ಲಿ.. ಜಗವನ್ನು ತೋರಿದ |೩| 
ಜಗದೋದ್ದಾರಕ ನಮ್ಮ ಉಡುಪಿ ಶ್ರೀ ಕೃಷ್ಣ! |೩| 

ಕೃಷ್ಣ ನೀ ಬೇಗನೆ ಬಾರೊ 
ಮುಖವನ್ನು ತೋರೊ 
ಕೃಷ್ಣ ನೀ ಬೇಗನೆ ಬಾರೊ.. |೩|

Category: ಶ್ರೀ ಕೃಷ್ಣ ಭಜನೆ
Category: ಭಕ್ತಿಗೀತೆಗಳು